ಕೆಲವೇ ಕೆಲವು ವಾರಗಳ ಹಿಂದೆಯಷ್ಟೇ 'ಬಿಗ್ ಬಾಸ್' ಮನೆಯಲ್ಲಿ ಪ್ರೇಮ ಪಕ್ಷಿಗಳಂತೆ ಹಾರಾಡಿಕೊಂಡು ಇದ್ದ ಜಗನ್ ಮತ್ತು ಆಶಿತಾ ಮಧ್ಯೆ ಈಗ ಎಲ್ಲವೂ ಸರಿ ಇದ್ದಂತೆ ಇಲ್ಲ. ಅತ್ಯಂತ ಆತ್ಮೀಯವಾಗಿ ಇದ್ದ ಆಶಿತಾ ಹಾಗೂ ಜಗನ್ ಮಧ್ಯೆ ಮನಸ್ತಾಪ ಮೂಡಿದೆ. ಅಂದು ಜಗನ್ ಕೆನ್ನೆಗೆ ಸಿಹಿ ಮುತ್ತು ನೀಡಿದ್ದ ಆಶಿತಾ, ಇಂದು ಜಗನ್ ಜೊತೆ ಜಗಳ ಮಾಡಿಕೊಂಡಿದ್ದಾರೆ.ಬಿಗ್ ಬಾಸ್' ಮನೆಯ ಕೆಲ ವಿಚಾರಗಳಲ್ಲಿ ಇಬ್ಬರ ದೃಷ್ಟಿಕೋನ ಬೇರೆ ಬೇರೆ ಆಗಿರುವ ಕಾರಣ ಇಬ್ಬರ ನಡುವೆ ಭಿನ್ನಾಭಿಪ್ರಾಯ ಮೂಡಿದೆ. ಈ ಭಿನ್ನಾಭಿಪ್ರಾಯ ತಾರಕಕ್ಕೆ ಏರಿದ ಕಾರಣ 'ಮಾತು ಬಿಡುವ' ಬಗ್ಗೆ ಜಗನ್ ಮಾತನಾಡಿದ್ದಾರೆ. ''ನನ್ನ ತಾಯಾಣೆ ಹೇಳ್ತೀನಿ, ನಾನು ಮಾತನಾಡುವುದನ್ನೇ ನಿಲ್ಲಿಸಿ ಬಿಡುತ್ತೇನೆ. ನನಗೆ ನಿಜವಾಗ್ಲೂ ತುಂಬಾ ಇರಿಟೇಟ್ (ಕಿರಿಕಿರಿ) ಆಗುತ್ತಿದೆ'' ಎಂದು ಆಶಿತಾ ಬಳಿ ಜಗನ್ ಹೇಳಿದ್ದಾರೆ.ಜಗನ್ ಆಡಿದ ಮಾತುಗಳನ್ನು ಕೇಳಿ ಆಶಿತಾ ಕೂಡ ಬೇಸರ ಮಾಡಿಕೊಂಡಿದ್ದಾರೆ. ಸದ್ಯ ಮುನಿಸಿಕೊಂಡಿರುವ ಆಶಿತಾ ಮತ್ತು ಜಗನ್ ಮತ್ತೆ ಒಂದಾಗುತ್ತಾರಾ ಅಂತ ಕಾದು ನೋಡಬೇಕು.
Bigg Boss Kannada 5: Week 7: ashitha and jagan had fight so they both are not speaking,and jagan has scolded to ashitha so now she felt bad ..watch this video